ಇದ್ದನು ಒಬ್ಬ ಸಾಫ್ಟ್ವೇರ್ ಜವಾನ್ ,
ಅವನ ಹೆಸರು ಭುವನ್ ,
ನೋಡಿದನು ಒಂದು ದಿನ ಅವನು ಲಗಾನ್,
ಮಾಡಿದನು ಶಪಥ ಅಂದೇ ನೋಡಿ ಖಾನ್,
ದಿನವಿಡೀ ಹಾಕುತಿದ್ದ ಕೊಡಿಗೆ ಲಗಾಂ,
ಇದನ್ನು ನೋಡಿ ಮ್ಯಾನೇಜರ್ ಆದ ಗರಂ ,
ಎದೆಗುಂದಲಿಲ್ಲ ಭುವನ್ ತಿಂದನು ಚಿಪ್ಸ್ ಅನ್ನು ಕರಂ ,
ಆಮೇಲೆ ಇಬ್ಬರು ಆದರು ನರಂ.
ನೋಡುತಿದ್ದೆ ನನ್ನ ಮುದ್ದು ಕಾನನನ್ನು,
ಇಡುತಿದ್ದ ಅವನು ಪುಟ್ಟ ಪುಟ್ಟ ಹೆಜ್ಜೆಯನ್ನು ,
ಹಾಡುತಿದ್ದ ಯಾವುದೊ ರಾಗವನ್ನು ,
ಚಿಂತೆಯೂ ಮಾಡದು ಬರಿದು ಅವನನ್ನು,
ಕಣ್ಣೊಳಗೆ ಇತ್ತು ಹೊಸ ಬೆಳಕಿನ್ನು ,
ಹಿಡಿಯಲು ಹೊರಟತ ತನ್ನ ಕೈಯಲಿ ಲೋಕವನ್ನು ,
ಆಗುತಿದ್ದ ಒಮ್ಮೊಮ್ಮೆ ನನ್ನ ನೋಡಿ ದಿಗಿಲಿನ್ನು ,
ಆದರೆ, ಅವನ ನೋಡಿ ಕಂಡೆ ನಾನು ಹೊಸ ಚಿಲುಮೆಯನ್ನು .
ನಿನ್ನ ನಗುವು ಮೂಡಿಸುತ್ತಿತ್ತು ನನ್ನಲ್ಲಿ ಒಲವು ,
ನಿನ್ನ ಮೊಗವು ಕೊಡುತ್ತಿತ್ತು ನನ್ನಲ್ಲಿ ಗೆಲುವು ,
ನಿನ್ನ ಚೆಲುವು ಏರಿಸುತಿತ್ತು ನನ್ನಲ್ಲಿ ಚಲವು ,
ಆದರೆ , ನಿನ್ನ ನೆನಪು ಉಳಿಸಿದೆ ಬರಿ ದಿಗಿಲು
ಕಣ್ಣ ಬಿಟ್ಟರೆ ಆ ನಿನ್ನ ಬಿಂಬ ಕನ್ನೆದುರಲಿ ,
ಕಣ್ಣ ಮುಚ್ಚಿದರೆ ಆ ನಿನ್ನ ರೂಪ ಮನಸಿನಲಿ ,
ಹೊರಟಿರುವೆ ಹೊಸದೊಂದು ಪಟ ಮೂಡಿಸಲು ಈ ಹೃದಯದಲಿ ,
ರುಜು ಮಾಡು ಇನ್ನೊಮ್ಮೆ ಬರುವುದಿಲ್ಲವೆಂದು ಈ ಜೀವನದಲಿ
ಹರಿಯುತಿದೆ ಈ ಜೀವನ ಎಗ್ಗಿಲದೆ ನೀರಿನ ಹಾಗೆ ,
ಕರಗುತಿದೆ ಈ ತನುವು ಗುರಿ ಇಲ್ಲದೆ ಮೇಣದ ಹಾಗೆ,
ಸರಿಯುತಿದೆ ಈ ಬಿಂಬ ದಾರಿ ಇಲ್ಲದೆ ಚಂದ್ರನ ಹಾಗೆ ,
ಸ್ತಿರ ಮಾಡು ಈ ಅಸ್ತಿರವಾದ ಮನಸ್ಸನು ನೀ ಬಂದು ವಜ್ರದ ಹಾಗೆ.