Saturday, March 10, 2012

ನನ್ನ ಗೆಳೆಯ ಭುವನ್




ಇದ್ದನು ಒಬ್ಬ ಸಾಫ್ಟ್ವೇರ್ ಜವಾನ್ ,
ಅವನ ಹೆಸರು ಭುವನ್ ,
ನೋಡಿದನು ಒಂದು ದಿನ ಅವನು ಲಗಾನ್,
ಮಾಡಿದನು ಶಪಥ ಅಂದೇ ನೋಡಿ ಖಾನ್,
ದಿನವಿಡೀ ಹಾಕುತಿದ್ದ ಕೊಡಿಗೆ ಲಗಾಂ,
ಇದನ್ನು ನೋಡಿ ಮ್ಯಾನೇಜರ್ ಆದ ಗರಂ ,
ಎದೆಗುಂದಲಿಲ್ಲ ಭುವನ್ ತಿಂದನು ಚಿಪ್ಸ್ ಅನ್ನು ಕರಂ ,
ಆಮೇಲೆ ಇಬ್ಬರು ಆದರು ನರಂ. 

ಹೊಸ ವರುಷ



ಬರುತಿದೆ ಹೊಸ ವರುಷ,
ತರುತಿದೆ  ಹೊಸ ಹರುಷ,
ಅವಸರದಿ ಮಾಡಲು ಹೋಗಬೇಡ ಸರಸ,
ಆಮೇಲೆ ನೀನು ಆಗುವೆ ಬರಿ ಕಸ 

ನನ್ನ ಮುದ್ದು ಅಳಿಯ : ಕಾನ


ನೋಡುತಿದ್ದೆ  ನನ್ನ  ಮುದ್ದು  ಕಾನನನ್ನು,
ಇಡುತಿದ್ದ ಅವನು  ಪುಟ್ಟ ಪುಟ್ಟ  ಹೆಜ್ಜೆಯನ್ನು ,
ಹಾಡುತಿದ್ದ  ಯಾವುದೊ  ರಾಗವನ್ನು ,
ಚಿಂತೆಯೂ   ಮಾಡದು ಬರಿದು   ಅವನನ್ನು,
ಕಣ್ಣೊಳಗೆ  ಇತ್ತು  ಹೊಸ  ಬೆಳಕಿನ್ನು ,
ಹಿಡಿಯಲು  ಹೊರಟತ ತನ್ನ  ಕೈಯಲಿ  ಲೋಕವನ್ನು ,
ಆಗುತಿದ್ದ  ಒಮ್ಮೊಮ್ಮೆ  ನನ್ನ  ನೋಡಿ  ದಿಗಿಲಿನ್ನು ,
ಆದರೆ,  ಅವನ  ನೋಡಿ  ಕಂಡೆ  ನಾನು  ಹೊಸ  ಚಿಲುಮೆಯನ್ನು .


ಕರೆಯೋಲೆ


ಕಣ್ಣೊಳಗಿನ  ಚಿತ್ರಗಳುನು  ಕನಸಾಗಿಸಿ,
ಎದೆಯೊಳಗಿನ  ಭಾವಗಳುನು  ಆಸೆಗಳಗಿಸಿ,
ಮನಸ್ಸಿನಲ್ಲಿರುವ  ತಳಮಳಗಳನು   ಜೋತೆಯಾಗಿಸಿ,
ಹೊಸದೊಂದು  ಲೋಕವ  ಕಟ್ಟಲು   ಹೊರಟಿರುವ  ನಮಗೆ  ಶುಭಕೋರಿ .


ನಗುವು


ನಿನ್ನ  ನಗುವು  ಮೂಡಿಸುತ್ತಿತ್ತು  ನನ್ನಲ್ಲಿ  ಒಲವು ,
ನಿನ್ನ  ಮೊಗವು  ಕೊಡುತ್ತಿತ್ತು   ನನ್ನಲ್ಲಿ  ಗೆಲುವು ,
ನಿನ್ನ  ಚೆಲುವು  ಏರಿಸುತಿತ್ತು  ನನ್ನಲ್ಲಿ  ಚಲವು ,
ಆದರೆ ,  ನಿನ್ನ  ನೆನಪು  ಉಳಿಸಿದೆ  ಬರಿ  ದಿಗಿಲು


ಕಳೆದು ಹೋದ ಪ್ರೀತಿಯ ಸುತ್ತ


ಕಣ್ಣ  ಬಿಟ್ಟರೆ  ಆ  ನಿನ್ನ  ಬಿಂಬ  ಕನ್ನೆದುರಲಿ ,
ಕಣ್ಣ  ಮುಚ್ಚಿದರೆ  ಆ  ನಿನ್ನ  ರೂಪ  ಮನಸಿನಲಿ ,
ಹೊರಟಿರುವೆ  ಹೊಸದೊಂದು  ಪಟ  ಮೂಡಿಸಲು  ಈ  ಹೃದಯದಲಿ ,
ರುಜು  ಮಾಡು  ಇನ್ನೊಮ್ಮೆ  ಬರುವುದಿಲ್ಲವೆಂದು  ಈ  ಜೀವನದಲಿ



ಸ್ತಿರ ಮಾಡು


ಹರಿಯುತಿದೆ   ಈ   ಜೀವನ  ಎಗ್ಗಿಲದೆ  ನೀರಿನ  ಹಾಗೆ ,
ಕರಗುತಿದೆ  ಈ   ತನುವು  ಗುರಿ  ಇಲ್ಲದೆ  ಮೇಣದ ಹಾಗೆ,
ಸರಿಯುತಿದೆ  ಈ  ಬಿಂಬ  ದಾರಿ  ಇಲ್ಲದೆ  ಚಂದ್ರನ  ಹಾಗೆ ,
ಸ್ತಿರ  ಮಾಡು  ಈ  ಅಸ್ತಿರವಾದ  ಮನಸ್ಸನು  ನೀ  ಬಂದು  ವಜ್ರದ  ಹಾಗೆ.



ಕೃತಜ್ಞತೆ

ಪ್ರತಿ ದಿನ ಯಾವುದೊ ಒಂದು ಯೋಚನೆಯ ಹಿಂದೆ, ಗುರಿಯ ಹಿಂದೆ, ಆಸೆಯ ಹಿಂದೆ  ಈ ನಮ್ಮ ಮನಸ್ಸು ಓಡುತ್ತಿರುತ್ತದೆ. ಆದರೆ ಆ ಗುರಿಯನ್ನು ನಾವು ಮುತ್ತುವೆವೋ ಇಲ್ಲವೋ ಎಂಬ ಭಯ ಮಾತ್ರ ನಮ್ಮನ್ನು ಯಾವತ್ತು ಬೆಂಬಿಡದೆ ಕಾಡುತಿರುತ್ತದೆ. ಅದು ಸಿಕ್ಕಾಗ ಸಂತೋಷ, ಇಲ್ಲದಿದ್ದರೆ ದುಕ್ಕ. ಅದು ಸಿಕ್ಕಗೆ ಇನ್ನೊಂದು, ಇನ್ನೊಂದು ಸಿಕ್ಕರೆ ಮತ್ತೊಂದು ಹೀಗೆ ಒಂದು ಅಜ್ಞಾತ ಗುರಿಯತ್ತ ನಮ್ಮ ಜೀವನ ಹೋಗಲು ಬಿಡಬಾರದು. ನಮ್ಮ ಸುತ್ತ ಮುತ್ತ ಲಿನ ಎಸ್ಟೋ ವಿಸ್ಮಯಗಳ ಬಗ್ಗೆ ನಾವು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ದೇವರು ನಮಗೆ ಕೊಟ್ಟಿರುವ ಈ ಸುಂದರ ಪರಿಸರ, ಜಗತ್ತು, ಕುಟುಂಬ, ಈ ಹುಟ್ಟು, ಈ ಗಾಳಿ, ನೀರು ಇನ್ನು ಎಸ್ಟೋ ಅಸಂಕ್ಯಾತ ವಸ್ತುಗಳನ್ನು ನಾವು ಉಪಯೋಗಿಸುತ್ತೇವೆ. ಯಾವುದೇ ಒಂದು ಕೃತಜ್ಞ ಭಾವ ಇಲ್ಲದೆ ಆದರೆ , ಒಂದು ಕ್ಷಣ ಯೋಚಿಸಿ ಉಸಿರಾಡುವಾಗ ದೇವರು ಕೊಟ್ಟ ಗಾಳಿಗೆ ಕ್ರುತಗ್ನರಾಗಿ , ಊಟ ಮಾಡುವಾಗ ಅನ್ನ ಕೊಟ್ಟ ದೇವರಿಗೆ, ಬೆಳೆದ ರೈತರಿಗೆ ಕೃತಜ್ಞತೆ ಸಲ್ಲಿಸಿ ಆಗ ಅದಕ್ಕೆ ಸಿಗುವ ಬೆಲೆ ಹೆಚ್ಚಾಗುತ್ತದೆ ,ಪೂಜ್ಯ ಭಾವ ಬರುತ್ತದೆ. ಈ ಮನೋಭಾವ ಬೆಳೆಸಿ , ಉಳಿಸಿದರೆ ಎಲ್ಲರಿಗು ಒಳಿತು.



ಸೇರು ಈ ಸಾಗರವನು


ಬಹು  ದಿನಗಳಿಂದ  ಕಾಯುತಲಿವೆ    ಈ   ಕಂಗಳು , ನೋಡಲು   ಆ  ಮಿಂಚಿನ  ಬೆಳಕನು ,
ಎಸ್ಟೋ  ವರ್ಷಗಳಿಂದ  ಹಾತೊರಿಯುತ್ತಿದೆ  ಈ  ಮನಸು , ತೆರೆದಿಡಲು  ತನ್ನ  ಭಾವಗಳನು ,
ಪ್ರತಿ  ಗಳಿಗೆ  ಅನುಕ್ಷಣವು ಈ  ಹೃದಯವು , ಹುಡುಕುತಲಿದೆ ಮೀಟುವ  ಕಾದಂಬರಿಯನು,
ಸಾಕಾಗಿದೆ  ಬೇಡದ  ಈ  ಒಂಟಿತನ , ಓದಿ  ಬಾ ಚೆಲುವೆ  ಸೇರಲು  ಈ  ಸಾಗರವನು